Wednesday, December 23, 2009

ಸೌದಿ ಅರೇಬಿಯಾ:ಪ್ರಜಾಪ್ರಭುತ್ವದ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ಒತ್ತಾಯ


ಜುಬೈಲ್ (ಸೌದಿ ಅರೇಬಿಯಾ) ಡಿಸೆಂಬರ್ 22: ಪ್ರಜಾಪ್ರಭುತ್ವದ ಮತ್ತು ಜ್ಯಾತ್ಯಾತೀತ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಇದ್ದ ಸ್ಥಳದಲ್ಲೇ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ದಮಾಮ್ ಮತ್ತು ಅಲ್ ಜುಬೈಲ್ ಘಟಕವು ಒತ್ತಾಯಿಸಿದೆ. ಬಾಬರೀ ಮಸ್ಜಿದ್ ಮತ್ತು ಲಿಬರ್ಹಾನ್ ಆಯೋಗ ಮತ್ತು ನಾವು ಎಂಬ ವಿಷಯದಲ್ಲಿ ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯಾ ಫ್ರಟೆರ್ನಿಟಿ ಫೋರಂ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಜನಾಬ್ ಮಹಮ್ಮದ್ ಶರೀಫ್ ಜೋಕಟ್ಟೆ ಈ ಒತ್ತಾಯವನ್ನು ಮುಂದಿಟ್ಟರು.

ಬಾಬರಿ ಮಸೀದಿ ಧ್ವಂಸ ಕೇವಲ ಮುಸ್ಲಿಂ ಸಮುದಾಯದ ಧಾರ್ಮಿಕ ಕೇಂದ್ರದ ಮೇಲೆ ನಡೆದ ದಾಳಿ ಅಲ್ಲ. ಇದು ಒಂದು ರಾಷ್ಟ್ರದ ಪ್ರಜಾಪ್ರಭುತ್ವ, ಅಲ್ಲಿನ ಸಂಸ್ಕೃತಿ ಮತ್ತು ಅಲ್ಲಿನ ಭಾವೈಕ್ಯತೆಯ ಮೇಲೆ ನಡೆದ ದಾಳಿ ಎಂದು ಹೇಳಿದರು.

ಸಮಾರಂಭದ ಮುಖ್ಯ ಭಾಷಣಕಾರರಾಗಿದ್ದ ಮಹಮ್ಮದ್ ಅಶ್ರಫ್ ಮಾತನಾಡಿ ರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರ ಹಿತಾಸಕ್ತಿ ಕಾಪಾಡುವ ಒಂದು ರಾಷ್ಟ್ರೀಯ ಪಕ್ಷವಿಲ್ಲದ ಕಾರಣ ಅಂದು ಬಾಬರಿ ಮಸ್ಜಿದ್ ಧ್ವಂಸಗೊಂಡಿತು. ಮುಸ್ಲಿಮರು ತಮ್ಮ ಹಕ್ಕು ಮತ್ತು ರಕ್ಷಣೆಗಳಿಗಾಗಿ ತಮ್ಮದೇ ಆದ ಸ್ವತಂತ್ರ ರಾಜಕೀಯ ಪಕ್ಷವೊಂದರ ಅಡಿಯಲ್ಲಿ ಸಂಘಟಿತರಾಗುವುದರ ಮೂಲಕ ರಾಜಕೀಯ ಸಬಲೀಕರಣ ಹೊಂದಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಮ್ಮದ್ ಇಕ್ಬಾಲ್ 463 ವರ್ಷಗಳ ಇತಿಹಾಸವಿರುವ ಬಾಬರಿ ಮಸ್ಜಿದ್ ಅನ್ನು ಕೋಮುವಾದಿ ದುಷ್ಟ ಶಕ್ತಿಗಳು ಧ್ವಂಸಗೊಳಿಸುವುದರ ಮೂಲಕ ಭಾರತದ ಸಮಾನತೆ, ಜ್ಯಾತ್ಯಾತೀತ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ವಿಶ್ವದ ಮುಂದೆ ಹರಾಜಿಗಿಟ್ಟರು ಎಂದು ಹೇಳಿದರು. ಇದರಿಂದಾಗಿ ಜಗಿತ್ತಿನಾದ್ಯಂತ ಶಾಂತಿ, ಸೌಹಾರ್ದತೆಯನ್ನು ಸಾರಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ನೈತಿಕ ಮೌಲ್ಯಗಳನ್ನೂ ವಿಶ್ವದ ಮುಂದೆ ಕಳೆದ ಈ ಕೋಮುವಾದಿಗಳು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ಮತ್ತು ನ್ಯಾಯಾಂಗಕ್ಕೆ ಸುಳ್ಳು ಭರವಸೆ ನೀಡುವುದರ ಮೂಲಕ ಬಾಬರಿ ಮಸ್ಜಿದನ್ನು ಧ್ವಂಸಗೊಳಿಸಿದರು. ಕೇಂದ್ರ ಸರ್ಕಾರ ಲಿಬರ್ಹಾನ್ ಆಯೋಗದ ವರದಿಯನ್ವಯ ಈ ಪ್ರಕರಣದ ಎಲ್ಲಾ ಆರೋಪಿಗಳ ಮೇಲೆ ಆರೋಪ ಪಟ್ಟಿ ದಾಖಲಿಸಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿಯಪಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸುನ್ನೀ ಸೆಂಟರ್ ಮುಖಂಡ ಮಹಮ್ಮದ್ ಬಂಟ್ವಾಳ, ದಾರುಲ್ ಇರ್ಶಾದ್ ಮುಖಂಡ ಅನ್ವರ್ ಗೂಡಿನಬಳಿ, ಜಮೀಯತುಲ್ ಫಲಾಹಿನ ಶಬ್ಬೀರ್ ಭಾಗವಹಿಸಿ ಮಾತನಾಡಿದರು. ಭಾರತವನ್ನು ಕೊಮುವಾದದಿಂದ ರಕ್ಷಿಸಿ ಎನ್ನುವ ಅಭಿಯಾನದ ಅಂಗವಾಗಿ ಮುಂಬರುವ ದಿನಗಳಲ್ಲಿ ಸೌದಿ ಅರೇಬಿಯಾದ ವಿವಿಧೆಡೆ ಈ ರೀತಿಯ ಚರ್ಚೆ ಮತ್ತು ವಿಚಾರಸಂಕಿರಣದಂತಹ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಕಿರಾಅತ್ ವಾಚಿಸಿದರೆ ಮಹಮ್ಮದ್ ಇಕ್ಬಾಲ್ ಸ್ವಾಗತಿಸಿ ರಿಜ್ವಾನ್ ವಂದಿಸಿದರು.

No comments:

Post a Comment