
ಮಕ್ಕಾ:(ಸೌದಿ ಅರೇಬಿಯಾ) ನವೆಂಬರ್ ೩೦: ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ಗುಜರಾತ್ ಮೂಲದ ವಯೋವೃದ್ಧ ಹಜ್ ಯಾತ್ರಾರ್ಥಿ ಮೊಹಮ್ಮದ್ ಯೂಸುಫ್ ರವರನ್ನು ಮೀನಾ ಸಮೀಪದ ಕಿಂಗ್ ಖಾಲಿದ್ ಸೇತುವೆಯ ಕೆಳಭಾಗದ ನಡುವೆ ಅರೆಪ್ರಜ್ಞಾವಸ್ಥೆಯಲ್ಲಿ ಇಂಡಿಯಾ ಫ್ರಟೆರ್ನಿಟಿ ಫೋರಮಿನ ಸದಸ್ಯರು ಪತ್ತೆ ಹಚ್ಚಿದರು. ಕೂಡಲೇ ಅವರಿಗೆ ಭಾರತೀಯ ಹಜ್ ಮಿಶನಿನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿದ ಈ ಸ್ವಯಂ ಸೇವಕರು ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಕ್ಕಾ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
source: http://www.sahilnews.org/kannada/gulf_news/4010.html
No comments:
Post a Comment