Tuesday, November 24, 2009

ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ನವೆಂಬರ್ 19 .2009 ರಿಂದ 15 ದಿನಗಳ ಕಾಲ ಹಮ್ಮಿಕೊಂಡ ಮಧುಮೇಹ ಜಾಗೃತಿ ಅಭಿಯಾನದ ಕರಪತ್ರದಲ್ಲಿ ಮುದ್ರಿಸಲಾಗಿದ್ದ ಮಾಹಿತಿ...



ಆರೋಗ್ಯಕರ ಜೀವನಕ್ಕಾಗಿ ಮಧುಮೇಹ (ಸಕ್ಕರೆ ಕಾಯಿಲೆ) ಬಗ್ಗೆ ಮುಂಜಾಗ್ರತೆ ವಹಿಸಿ

ಆರೋಗ್ಯ ಜಾಗೃತಿ ಅಭಿಯಾನ

ಮಧುಮೇಹ ಎಂದರೇನು?
ಮಧುಮೇಹದ ಲಕ್ಷಣಗಳು.
ಮಧುಮೇಹದ ವಿಧಗಳು.
ರಕ್ತದಲ್ಲಿನ ಸಕ್ಕರೆಯ ಅಂಶದ ಮೇಲೆ ನಿಯಂತ್ರಣ.
ನಿಯಮಿತವಾಗಿ ಔಷಧಿ ಸೇವನೆ.
ನಿಯಮಿತ ವ್ಯಾಯಾಮ.
ಮಧುಮೇಹದ ಕುರಿತು ಸಾಧ್ಯವಿದ್ದಷ್ಟು ಮಾಹಿತಿ ಪಡೆದುಕೊಳ್ಳುವುದು.
ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸುವುದು.

ಮುಂಜಾಗ್ರತೆಯೇ ಚಿಕಿತ್ಸೆಗಿಂತ ಉತ್ತಮ ಪರಿಹಾರ

ಮಧುಮೇಹ ಎನ್ನುವುದು ನಮ್ಮ ಆಹಾರದಲ್ಲಿನ ಸಕ್ಕರೆಯ ಅಂಶವನ್ನು ರೋಗನಿರೋಧಕ ಶಕ್ತಿಯಿಂದ ಶರೀರಕ್ಕೆ ಆವಶ್ಯವುಳ್ಳ ಶಕ್ತಿಯನ್ನಾಗಿ ಪರಿವರ್ತಿಸಿಲಾಗದಂತಹ ಸಂಧರ್ಭದಲ್ಲಿ ಬರುವ ರೋಗಾವಸ್ಥೆಯಾಗಿದೆ.
ನಾವು ಸೇವಿಸಿದ ಆಹಾರ ಜೀರ್ಣವಾಗಿ ಗ್ಲುಕೋಸ್ (ಸಕ್ಕರೆ) ಆಗಿ ಪರಿವರ್ತನೆ ಹೊಂದಿ ರಕ್ತದಲ್ಲಿ ಸೇರುವಾಗ ವಾನ್ಗ್ರಿಯಾಸ್ ಎನ್ನುವ ಗ್ರಂಥಿ ಉತ್ಪಾದಿಸುವ ಇನ್ಸುಲಿನ್ ಹಾರ್ಮೋನುಗಳು ಗ್ಲುಕೋಸ್ ಅನ್ನು ಶರೀರದ ವಿವಿಧ ಭಾಗಗಳಿಗೆ ತಲುಪಿಸುತ್ತದೆ. ಆನಂತರ ರಕ್ತದಲ್ಲಿ ಸಕ್ಕರೆಯ ಅಂಶ ನಿಯಮಿತ ಪ್ರಮಾಣದಲ್ಲಿ ಸೇರಿಸಲ್ಪಡುತ್ತದೆ. ಆದರೆ ಮಧುಮೇಹ ಪೀಡಿತರಾದವರ ರಕ್ತದಲ್ಲಿ ಈ ಪ್ರಮಾಣ ಅನಿಯಮಿತವಾಗಿರುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರುತ್ತಾ ಹೋಗುತ್ತದೆ.
ಇಂದು ವಿಶ್ವದಲ್ಲಿ ಸುಮಾರು ೨೫೦ ಮಿಲಿಯನ್ ಜನರು ಮಧುಮೇಹದಿಂದ ನರಳುತಿದ್ದಾರೆ. ಇದೇ ಪ್ರಮಾಣದಲ್ಲಿ ಮುಂದುವರಿದಲ್ಲಿ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಮಧುಮೇಹಿಗಳ ಸಂಖ್ಯೆ ಸುಮಾರು 390 ಮಿಲಿಯನ್ ದಾಟಬಹುದು. ವಿಶ್ವದ ಅತೀ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಈಗ ಅಗ್ರ ಸ್ಥಾನದಲ್ಲಿದೆ.
ಮಧುಮೇಹದ ಲಕ್ಷಣಗಳು:
ಅತೀ ಬಾಯಾರಿಕೆ ಮತ್ತು ಹಸಿವು.
ದೃಷ್ಠಿ ಮಂದತೆ.
ಗಾಯಗಳು ಉಂಟಾದಲ್ಲಿ ಒಣಗಲು ದೀರ್ಘ ಸಮಯ ತೆಗೆದುಕೊಳ್ಳುವಿಕೆ.
ಬಾಯಿ ಮತ್ತು ಗಂಟಲು ಒಣಗುವುದು.
ಹೆಚ್ಚಿನ ಆಯಾಸ ಮತ್ತು ನಿತ್ರಾಣ.
ಕಾಲು ನೋವು ಉಂಟಾಗುವುದು.
ಅರಿವಿಲ್ಲದೇ ದೇಹದ ತೂಕದಲ್ಲಿ ಇಳಿಮುಖ ಉಂಟಾಗುವುದು.
ಮಾನಸಿಕ ಬದಲಾವಣೆ ಮತ್ತು ಖಿನ್ನತೆ.
ಕೈಕಾಲುಗಳಲ್ಲಿ ಕಂಪನ.
ಆಗಾಗ್ಗೆ ಮೂತ್ರ ವಿಸರ್ಜನೆ.


ಆರೋಗ್ಯವಂತನಾದ ವ್ಯಕ್ತಿಯ ದೇಹದಲ್ಲಿ ಸಕ್ಕರೆಯ ಪ್ರಮಾಣ ಬೆಳಗ್ಗೆ ಆಹಾರ ಸೇವಿಸುವುದಕ್ಕಿಂತ ಮುಂಚೆ 100mg/dL ಕ್ಕಿಂತಲೂ ಹೆಚ್ಚು ಮತ್ತು ಆಹಾರ ಸೇವಿಸಿದ ಎರಡು ಘಂಟೆಯ ನಂತರ 140mg/dL ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಇದ್ದರೆ ಆ ವ್ಯಕ್ತಿ ಮಧುಮೇಹದ ಕುರಿತು ಜಾಗ್ರತೆ ಪಾಲಿಸಬೇಕಾಗಿರುವುದು ಆವಶ್ಯಕವಾಗಿದೆ.

ಮಧುಮೆಹಗಳಲ್ಲಿ ಎರಡು ವಿಧ:

ವಿಧ ಒಂದು: ದೇಹದಲ್ಲಿ ರೋಗನಿರೋಧಕದ ಉತ್ಪಾದನೆಯು ನಡೆಯದೆ ಇರುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಅದರ ಕೋಶಗಳಲ್ಲಿ ಪ್ರವೇಶಿಸಲು ಸಾಧ್ಯವಾಗದೆ ರಕ್ತದಲ್ಲೇ ನಿಲ್ಲುತ್ತದೆ. ಹಾಗೇ ರಕ್ತದಲ್ಲಿ ಗ್ಲುಕೋಸ್ ಮತ್ತು ಕೆಟೋನ್ ಎಂಬ ವಸ್ತು ಮಿಶ್ರಣ ಹೊಂದಿದ ಕಾರಣವಾಗಿ ಮೂತ್ರಪಿಂಡ ತನ್ನ ಕ್ಷಮತೆಗಿಂತಲೂ ಅಧಿಕ ಕೆಲಸವನ್ನು ನಿರ್ವಹಿಸುವ ಕಾರಣ ಮೂತ್ರವಿಸರ್ಜನೆ ಮತ್ತು ದಾಹ ವೃದ್ಧಿಯಾಗುತ್ತದೆ.
ವಿಧ ಎರಡು: ಶರೀರದಲ್ಲಿ ಇನ್ಸುಲಿನ್ ಉತ್ಪಾದನೆ ಅನುಕೂಲಕರವಾಗಿ ಉತ್ಪಾದನೆಯಾಗಲು ಕೋಶಗಳು ಸಹಕರಿಸದೇ ಇದ್ದಲ್ಲಿ ಸಕ್ಕರೆಯ ಅಂಶ ಅದರ ಕೋಶಗಳನ್ನು ತಲುಪದೇ ರಕ್ತದಲ್ಲಿಯೇ ಬಾಕಿಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ವಂಶಪಾರಂಪರ್ಯವಾಗಿ, ಮತ್ತು ಜೀವನ ಶೈಲಿಯಲ್ಲಿ ಉಂಟಾಗುವ ಬದಲಾವಣೆಯಿಂದಾಗಿ, ಆಹಾರ ಶೈಲಿಯಲ್ಲಿನ ಬದಲಾವಣೆಯಿಂದಾಗಿ, ವ್ಯಾಯಾಮ ಮಾಡದೇ ಇರುವ ಕಾರಣಗಳಿಂದಾಗಿ ಮಧುಮೇಹ ಉಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
ಮಧುಮೇಹ ರೋಗವಿರುವವರು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕಾಗಿರುವುದು ಅತ್ಯವಶ್ಯಕವಾಗಿದೆ. ಪ್ರಾಯ ಹೆಚ್ಚಾಗುತ್ತಿದ್ದಂತೆ ಮಧುಮೇಹದ ರೋಗಲಕ್ಷಣಗಳೂ ಹೆಚ್ಚಾಗುವುದು ಸ್ವಾಭಾವಿಕವಾಗಿದೆ. ಆದ್ದರಿಂದ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಪರಿಶೀಲಿಸುವುದರ ಜೊತೆಗೆ ವೈದ್ಯರ ಮಾರ್ಗದರ್ಶನದುನುಸಾರ ಆವಶ್ಯ ಬಂದಲ್ಲಿ ಚಿಕಿತ್ಸಾ ಪದ್ಧತಿಯಲ್ಲಿ ಬದಲಾವಣೆ ಮಾಡಬೇಕಾಗಿರುವುದು ಆವಶ್ಯವಾಗಿದೆ.

ಮಧುಮೇಹ ರೋಗದಲ್ಲಿ ಚಿಕಿತ್ಸೆಯಷ್ಟೇ ಪ್ರಾಧಾನ್ಯತೆಯನ್ನು ರೋಗದ ಕುರಿತು ಅರಿಯಲು ನೀಡಬೇಕಾಗಿರುವುದು ಅವಶ್ಯಕವಾಗಿದೆ. ವೈದ್ಯರ ನಿರ್ದೇಶಾನುಸಾರ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದರ ಜೊತೆಗೆ ಆ ಔಷಧಿಯ ಸೇವನೆಯಿಂದ ದೇಹದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತಿದೆಯೇ ಎಂಬುದರ ಕುರಿತು ಗಮನಹರಿಸಿ ಅದನ್ನು ವೈದ್ಯರ ಗಮನಕ್ಕೆ ತರಬೇಕು.
ಮಧುಮೇಹವುಳ್ಳ ಎಲ್ಲಾ ರೋಗಿಗಳಿಗೆ ಒಂದೇ ರೀತಿಯ ಆಹಾರ ಪದ್ಧತಿಯನ್ನು ವೈದ್ಯರು ನಿರ್ದೇಶಿಸುವುದಿಲ್ಲ. ಆದರಿಂದ ವೈದ್ಯರ ಸಲಹೆಯನುಸಾರ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಳ್ಳಬೇಕು.
ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡಲು ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ನಿಯಮಿತ ವ್ಯಾಯಾಮ ಸಹಕಾರಿ.
ಮಧುಮೇಹವುಳ್ಳ ರೋಗಿಗಳು ವೈದ್ಯರ ಸಲಹೆಯನುಸಾರ ನಿಯಮಿತ ವ್ಯಾಯಾಮವನ್ನು ಕೈಗೊಳ್ಳುವುದರ ಜೊತೆಗೆ ಪ್ರತಿನಿತ್ಯ ವ್ಯಾಯಾಮಕ್ಕಾಗಿ ಮೂವತ್ತು ನಿಮಿಷಗಳನ್ನು ಮೀಸಲಿಡಲು ಪ್ರಯತ್ನಿಸಬೇಕು.
ಮಧುಮೇಹ ರೋಗದಲ್ಲಿ ನಿಯಂತ್ರಣ ಪಾಲಿಸದೆ ಹೋದಲ್ಲಿ ಈ ಕೆಳಕಂಡ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಆದರಿಂದ ಈ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ.

ದೇಹದಲ್ಲಿನ ಗಾಯವಾದ ಭಾಗವನ್ನು ಕತ್ತರಿಸಬೇಕಾಗಿಬರಬಹುದು.
ಅಂಧತ್ವ ಮತ್ತು ದೃಷ್ಠಿ ಮಂದತೆ ಉಂಟಾಗಬಹುದು.
ದಂತ ಸಂಬಂಧಿ ರೋಗಗಳಿಗೆ ತುತ್ತಾಗಬಹುದು.
ಹೃದ್ರೋಗ ಉಂಟಾಗಬಹುದು.
ಅಧಿಕ ರಕ್ತದೊತ್ತಡ ಉಂಟಾಗಬಹುದು.
ಮಾನಸಿಕ ಖಿನ್ನತೆ ಉಂಟಾಗಬಹುದು.
ನರ ಸಂಬಂಧಿ ರೋಗಗಳಿಗೆ ತುತ್ತಾಗಬಹುದು.
ಗರ್ಭಧಾರಣೆ ಮತ್ತು ಹೆರಿಗೆ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು.

ರೋಗ ಬರದಂತೆ ಮುಂಜಾಗ್ರತೆ ವಹಿಸುವುದೇ ಚಿಕಿತ್ಸೆಗಿಂತ ಉತ್ತಮ ಪರಿಹಾರ

ಮಧುಮೇಹ ಒಂದು ಗುಣಪಡಿಸಲಾಗದ ರೋಗವಾಗಿದ್ದು ಅದು ಬರದಂತೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.
ಆದರಿಂದ ಈ ಕೆಳಕಂಡ ಲಕ್ಷಣಗಳಿರುವವರು ಮುಂಜಾಗ್ರತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ.
ಅವರೆಂದರೆ
ಅತ್ಯಧಿಕ ತೂಕವುಳ್ಳವರು.
ನಿಯಮಿತವಾಗಿ ವ್ಯಾಯಾಮ ಮಾಡದಿರುವವರು.
ಅಧಿಕ ರಕ್ತದೊತ್ತಡ ಇರುವವರು.
ಸಹೋದರ ಅಥವಾ ಸಹೋದರಿಗೆ ಮಧುಮೇಹ ಇರುವವರು.
ತಂದೆ ಅಥವಾ ತಾಯಿ ಮಧುಮೇಹ ಪೀಡಿತರಾಗಿರುವವರು.
ಗರ್ಭಧಾರಣೆಯ ಸಮಯದಲ್ಲಿ ಮಧುಮೇಹ ಪೀಡಿತರಾದವರು ಅಥವಾ ಹುಟ್ಟಿದ ಮಗು ಒಂಬತ್ತು ಪೌಂಡ್ ಗಿಂತಲೂ (4.1 ಕಿ.ಗ್ರಾಂ)
ಹೆಚ್ಚಿನ ತೂಕ ಹೊಂದಿದ್ದಲ್ಲಿ ಅಂತಹ ಮಹಿಳೆಯರು.

ಗಮನಿಸಿ: ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾದಂತಹ ಚಿಕಿತ್ಸಾ ಪದ್ಧತಿಯನ್ನು ಇದುವರೆಗೆ ಕಂಡುಹಿಡಿದಿಲ್ಲ.ಆದರೆ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುವುದರ ಮೂಲಕ ರೋಗದ ಮೇಲೆ ನಿಯಂತರ ಸಾಧಿಸುವುದರ ಜೊತೆಗೆ ಈ ಮೂಲಕ ಬರುವ ಇತರ ರೋಗಗಳನ್ನೂ ತಡೆಗಟ್ಟಬಹುದು.

ಈ ಪ್ರಕಟಣೆ ಮಧುಮೇಹ ರೋಗ ಮತ್ತು ಅದರ ಚಿಕಿತ್ಸೆಯನ್ನು ವಿರೋಧಿಸುವಂತಹದಲ್ಲ, ಬದಲಾಗಿ ಸಾಕಷ್ಟು ಪ್ರಮಾಣದಲ್ಲಿ ವೃದ್ಧಿಸುತ್ತಿರುವ ಈ ರೋಗದ ಬಗ್ಗೆ ಸಾಕಷ್ಟು ಅರಿವು ಮತ್ತು ಮುಂಜಾಗ್ರತೆ ಮೂಡಿಸುವ ಉದ್ದೇಶವನ್ನು ಹೊಂದಿದೆ. ಮಧುಮೇಹದ ಬಗ್ಗೆ ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಸಹಕರಿಸಿರಿ.

No comments:

Post a Comment